...
ಕತೆ, ಕವನ, ಲೇಖನ, ಸಂಗೀತ, Piano, Music Covers, Photos, videos ಇತ್ಯಾದಿ...
Pages
ಮನೆ/Home
ಕತೆಗಳು
ಕವನಗಳು
ಇಂಗ್ಲೆಂಡ್ ಪತ್ರಗಳು
Monday, 21 October 2024
ಯಾರು?
ಮೂಳೆಯನು ತುಂಡರಿಸಿ
ರಂಧ್ರಗಳ ಕೊರೆಕೊರೆದು
ಉಸಿರಿಗೆ ನಾದವನು ಮೊದಲು ಕೊಟ್ಟವರಾರು?
ಸಾವಿನಲಿ ಜೀವವನು
ಊದಲೂಬಹುದೆಂದು
ತನ್ನೆಲ್ಲ ಜನರಿಗೆ ಹೇಳಿ ಕೊಟ್ಟವರಾರು?
ಆಳದಾ ನೋವುಗಳ
ಹೇಳದಾ ಗೋಳುಗಳ
ಅಮೂರ್ತ ರಾಗದಲಿ ನುಡಿಸಿ ಕೊಟ್ಟವರಾರು?
ರೂಪಕವ ಹಾಕುತ್ತ
ಉಪಮೆಗಳ ಹೇಳುತ್ತ
ರಾಗಕ್ಕೆ ಶಬ್ದಗಳ ಕವನ ಕೊಟ್ಟವರಾರು?
Newer Post
Older Post
Home