Tuesday, 3 December 2019
Sunday, 10 November 2019
ರಂಗಸ್ಥಳ: ರಾಮಾಯಣ
ಸಿಯಾ (ಸೌತ್ ಇಂಡಿಯನ್ ಅಸೋಸಿಅಯೇಷನ್), ಡಾರ್ಬಿ ದೀಪಾವಳಿ ೨೦೧೯ ಸಂಭ್ರಮದಲ್ಲಿ ನನ್ನದು ವನವಾಸೀ ರಾಮನ ಪಾತ್ರ
Thursday, 7 March 2019
ನಾನಾರು?
ಹೇಳಿ ಯಾರಾದರೂ ನಾನೆಲ್ಲಿರುವೆ
ಹೇಳಿ ಯಾರಾದರೂ ನಾ ಏಕಿರುವೆ
ಸರಿಯೊ ತಪ್ಪೊ ಹೇಳಿ ನನ್ನಯ ದಾರಿ
ಶುರು ಮಾಡಲೊ ಬೇಡವೊ ನನ್ನ ಸವಾರಿ
ಹೆದರುವೆ ನಾ ಕನಸುಗಳಿಂದಲೆ
ಇರಿಯುವುದೇ ಬದುಕನು
ಬೆದರುವೆ ನಾ ನನ್ನವರಿಂದಲೆ
ಮುರಿಯುವರೇ ಮನಸನು
ನಾ ಕತ್ತಲೋ ಬೆಳದಿಂಗಳೊ
ನಾ ಬೂದಿಯೊ ಇಲ್ಲ ಬೆಂಕಿಯೊ
ನಾ ಬಿಂದುವೊ ನಾ ಅನಂತವೊ
ನಾ ಶಾಂತಿಯೊ ಇಲ್ಲ ಪ್ರಳಯವೊ
ಹೇಳಿ ಯಾರಾದರೂ ನಾನಾರು
ಏಕೆ ಇಲ್ಲಿರುವೆ ಯಾಕಾದರು
ನನ್ನ ಮೇಲೆ ನನಗೇ ನಂಬಿಕೆ ಬರಬಹುದೆ
ನಾನಿದ್ದರೂ ಇರದಿದ್ದರೂ ಜಗ ಬದಲಾಗುವುದೆ
ಯಾರ ಮಡಿಲಲಿ ಮಲಗಿ ಅಳಲಿ
ಎಡವಿದರೆ ನಾ
ಯಾರನ್ನು ಕೇಳಲಿ ದಾರಿ
ತಪ್ಪಿದರೆ ನಾ
ನಾ ಮೌನವೋ ನಾ ಭಾಷೆಯೊ
ನಾ ಆಸೆಯೋ ನಿರಾಸೆಯೊ
ನಾ ರೆಕ್ಕೆಯೋ ಕಲ್ ಬಂಡೆಯೊ
ದೂರಾಸೆಯೋ ದುರಾಸೆಯೊ
ನಿಜ ಹೇಳಲೆ ನುಂಗಿ ಕೊಳ್ಳಲೇ
ಮನ ಬಿಚ್ಚಲೆ ಇಲ್ಲ ಅದುಮಲೆ
ಬಲೆ ಹರಿಯಲೆ ಶರಣಾಗಲೇ
ನಾ ಸೆಣಸಲೇ ಶರಣಾಗಲೆ
ನಾನಾರು?
(`ಮೈ ಕೌನ್ ಹೂಂ` ಎನ್ನುವ ಹಾಡಿನ ಭಾವಾನುವಾದ, ಅದೇ ಧಾಟಿಯಲ್ಲಿ ಹಾಡಬಹುದು)
Subscribe to:
Posts (Atom)