Thursday, 26 November 2015

ಬೆಣ್ಣೆಹಣ್ಣುಗಳು

ನಂಗಿಷ್ಟಅವು ಅಂಗೈಲಿ ಒಪ್ಪುವ ರೀತಿ – 
ಧಡೂತಿ ಬುದ್ಧನ ತೂಕ, 
ಮಾಗಲು ತುಂಟ ಹಿಸುಕು, 
ಚೂರಿಯ ನೀಳ ಸೀಳು, 
ಮೆದು ಹೀರುತ್ತ 
ತಿರಿಗಿಸುತ್ತ ಇಬ್ಭಾಗಿಸಿದರೆ 
ಗಟ್ಟಿ ಚರ್ಮ ಸಲೀಸಾಗಿ ಸುಲಿದು 
ಬೆತ್ತಲೆ, ಸಾಬೂನಿನಂತೆ ನುಣುಚು.  

ನಾನೇ ಬಡಿಸಿಕೊಳ್ಳುವೆ ನನಗೆ 
ಸೀಳಿ ಅಗಲಿಸಿ 
ಬಿಳಿಪಿಂಗಾಣಿಯ ಮೇಲೆ 
ಎಣ್ಣೆ ಸವರಿ ಹೊಳಪಿಸಿ, 
ಇಲ್ಲಾ ತುಂಬುವೆ ನುಣುಪು ಕುಣಿಯನು 
ಘಾಟು ಒಗ್ಗರಣೆಯಲಿ 
ಎಬ್ಬುತ್ತ 
ತಿಳಿಬೆಣ್ಣೆಯ ಅಡಗು 

ನೀವು ಓದಿದ ಯಾವುದೇ ಪಥ್ಯವೂ 
ಕಟ್ಟುನಿಟ್ಟಾಗಿ ಅವನ್ನು ನಿರ್ಬಂಧಿಸಿವೆ

(ಮೂಲ: 'Avocados' by Esther Morgan, in the collection ‘Beyond Calling Distance.’)

('ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Friday, 20 November 2015

ರಂಗಸ್ಥಳ: ಬೊಂಬೆಯಾಟ

 

ಕನ್ನಡದ ಸಿನೆಮಾ ಹಾಡುಗಳ ಗುಚ್ಛಕ್ಕೆ ಬೊಂಬೆಗಳ ಕುಣಿತ.  

೨೦೧೫ ರ SIA (South Indian Association). 

ನಿರ್ದೇಶನ: ಶ್ರೀದೇವಿ ವಲ್ಲೀಶ್